ಆಚರವಿಲ್ಲದ ನಾಲಿಗೆ
ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ
ವಿಚಾರವಿಲ್ಲದೆ ಪರರ ದುಶಿಪುದಕ್ಕೆ
ಚಾಚಿಕೊನದಿರುವಂತ ನಾಲಿಗೆ
ಚಾಡಿ ಹೇಳಲು ಬೇಡ ನಾಲಿಗೆ
ನಿನ್ನ ಬೇಡಿಕೊಂಬುವೆನು ನಾಲಿಗೆ
ರೂಢಿಗೋಡೆಯ ಶ್ರೀ ರಾಮನ ನಾಮವ
ಪಾಡುತಲಿರು ಕಂಡ್ಯ ನಾಲಿಗೆ
ಪ್ರಾತಃಕಾಲದೊಳೆದ್ದು ನಾಲಿಗೆ
ಶ್ರೀಪತಿ ಎನ್ನಬಾರದೆ ನಾಲಿಗೆ
ಪತಿತಪಾವನ ನಮ್ಮ ಪ್ರತಿಪತಿಜನಕನ
ಸತತವು ನುಡಿಕಂಡ್ಯ ನಾಲಿಗೆ
ಹರಿಯ ಸ್ಮರಣೆ ಮಾಡು ನಾಲಿಗೆ
ನರಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರ ವಿಠಲ ರಾಯನ
ಚರಣ ಕಮಲ ನೆನೆ ನಾಲಿಗೆ
A wonderful poem by Purandara Dasa
2 comments:
ದಾಸರು ಕಂಡ ಕೊಂಡಾಡಿದ ಸತ್ಯಗಳು.ಇವತ್ತಿಗೂ ನಮ್ಮನ್ನು ಅಲ್ಲಲ್ಲಿ ಆಯಾ ಸನ್ನಿವೇಶಕ್ಕೆ ತಕ್ಕಹಾಗೆ ನಮ್ಮನ್ನು ಎಚ್ಚರಿಸುತ್ತಿರುತ್ತವೆ.
ಛೋಲೊ ಅದ ..
Thanks Sanju
Post a Comment